ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನ ಮತ್ತು ತಂತ್ರಜ್ಞಾನ

ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ(“ಎಸ್ ಮತ್ತುಟಿ”) ಪ್ರಮುಖವಾಗಿದೆ. ಜ್ಞಾನದ ರಚನೆ ಮತ್ತು ಬಳಕೆಯಲ್ಲಿ ಎಸ್ ಮತ್ತು ಟಿಯ ಮುಂದಾಳತ್ವ ಅವಿಭಾಜ್ಯ ಅಂಗವಾಗಿದೆ. ಎಸ್ ಮತ್ತು ಟಿಯ ಬೆಳವಣಿಗೆ ಕೈಗಾರಿಕೆಯಲ್ಲಿ ಹೊಸ ದಾರಿಗಳನ್ನು ತೆರೆಯುವ ಪ್ರಮುಖ ಅಂಶವಾಗಿದೆ ಮತ್ತು ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರದಲ್ಲಿ ನಿರ್ಣಾಯಕ ಜ್ಞಾನ ಸೇವೆಗಳನ್ನು ಒದಗಿಸುವ ಯಂತ್ರವಾಗಿದೆ.

ಜಾಗತಿಕ ಕ್ಷೇತ್ರದಲ್ಲಿ ಭಾರತವು ಮುಂದಾಳಾಗಿ ಹೊರಹೊಮ್ಮ ಬೇಕಾದರೆ, ಎಸ್ ಮತ್ತು ಟಿ ಕ್ಷೇತ್ರದಲ್ಲಿ ಮುಂದಾಳಾಗಿರಬೇಕು. ದೇಶದಲ್ಲಿ ನಡೆಸುತ್ತಿರುವ ಸಂಶೋಧನಾ ಚಟುವಟಿಕೆಗಳ ಗಾತ್ರ ಹಾಗೂ ಪ್ರಯೋಜನಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕಾದ ಅವಶ್ಯಕತೆ ಇದೆ. ದೇಶದ ಸಂಶೋಧನಾ ನಕ್ಷೆಯನ್ನು ಉತ್ತಮಗೊಳಿಸುವ ಅವಶ್ಯಕತೆ ಇದೆ. ಇದನ್ನು ಆರ್ ಮತ್ತು ಡಿ ಯನ್ನು ಉತ್ತಮಗೊಳಿಸುವ ಅನೇಕ ಕ್ರಮಗಳ ಮೂಲಕ ಸಾಧಿಸಬಹುದು.

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು:
  • ಸಂಶೋಧನೆಗೆ ಹಣಕಾಸನ್ನು ಪಡೆಯುವಲ್ಲಿನ ಅಡೆತಡೆಗಳನ್ನು ಗುರುತಿಸುವುದು ಮತ್ತು ನಿವಾರಣೆ
  • ಭಾರತವು ಮಹತ್ವದ ಮುಂದಾಳಿನ ಪಾತ್ರ ವಹಿಸಬಹುದಾದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪರಿಹಾರವಾಗದ ಕೆಲವು ಪ್ರಮುಖ ತೊಂದರೆಗಳನ್ನು ಗುರುತಿಸುವುದು
  • ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಬಂಧ ಪಟ್ಟ ಕ್ಷೇತ್ರದಲ್ಲಿ ಭವಿಷ್ಯದ ಸಂಶೋಧನೆಯ ಗುರುತಿಸುವಿಕೆ
  • ಅಬಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಉಪಯೋಗವು ಒಂದು ನಿರ್ಣಾಯಕ ಸಾಧನವೆಂದು ಮನದಟ್ಟು ಮಾಡುವುದು ಮತ್ತು ಬಡವರು ಮತ್ತು ಕೆಳವರ್ಗದ ಸಮಸ್ಯೆಗಳ ನಿವಾರಣೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಉಪಯೋಗದ ಅನುಕೂಲತೆಗಳು

More Science and Technology links: ಸಲಹೆಗಳು     ಪರ್ಯಾಲೋಚನೆ