ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಬೃಹತ್ ನೇರ ಜಾಲಗಳು

ಬೃಹತ್ ನೇರ ಜಾಲಗಳು

ಬೃಹತ್ ನೇರ ಜಾಲವೂ ಒಂದು ಜಾಲ ಕ್ಷೇತ್ರವೇ ಆಗಿದೆ. ಇದು ವಿಷಯಗಳ ಮಾಹಿತಿಗೆ ಒಂದು ನೇರ ಪ್ರವೇಶವನ್ನು ಒದಗಿಸುತ್ತದೆ ಮತ್ತು ಇದನ್ನು ಉಪ ಯೋಗಿಸುವವರಿಗೆ ವಿಸ್ತ್ರುತ ಸಂಪನ್ಮೂಲಗಳು ಮತ್ತು ವ್ಯಕ್ತಿ ಅಧ್ಯಯನ, ಇ-ಅಂಚೆ ಗುಂಪುಗಳು, ಚಾವಡಿಗಳು, ಹುಡುಕು ಯಂತ್ರಗಳು, ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತದೆ. ಎನ್.ಕೆ.ಸಿ.ಯು, ವಿಕೇಂದ್ರೀಕರಣ, ಮಾಹಿತಿ ಹಕ್ಕು, ಜನರ ಭಾಗಿತ್ವ ಮತ್ತು ದೇಶದಲ್ಲಿನ ಪಾರದರ್ಶಕತೆಗೆ ಇದನ್ನು ಒಂದು ಮಾರ್ಗವಾಗಿ ಅಂಗೀಕರಿಸಿದೆ. ಹೆಚ್ಚು ಜನರು ತಮ್ಮ ಹಕ್ಕುಗಳನ್ನು ಚಲಾಯಿಸಲು, ಸಾರ್ವಜನಿಕ ಬೃಹತ್ ನೇರ ಜಾಲಗಳು ಮುಖ್ಯ ಪಾತ್ರ ವಹಿಸಬಹುದು.

ಈ ಸಂದರ್ಭದಲ್ಲಿ ಎನ್.ಕೆ.ಸಿ.ಯು,ಕೆಲವು ಮುಖ್ಯ ವಲಯಗಳಲ್ಲಿ ಬೃಹತ್ ನೇರ ಜಾಲಗಳ ನಿರ್ಮಾಣಕ್ಕೆ ಈ ಕೆಳಗಿನ ಕಾರ್ಯ ವಿಧಾನಗಳನ್ನು ಅಳವಡಿಸಿಕೊಂಡಿದೆ:
 • ಮುಂಚೂಣಿ ಸಂಘಟನೆಗಳ ಗುರುತಿಸುವಿಕೆ
 • ಮುಂಚೂಣಿ ಸಂಘಟನೆಗಳಿಂದ ಬೃಹತ್ ನೇರ ಜಾಲಗಳ ವಿನ್ಯಾಸದ ಬಗ್ಗೆ ಪ್ರಸ್ತಾವನೆಯನ್ನು ಆಯೋಗದ ಅವಗಾಹನೆಗೆ ಒಪ್ಪಿಸುವುದು
 • ಶೇರುದಾರರು ಮತ್ತು ಪಾಲುಗಾರರನ್ನು ಗುರುತಿಸುವುದು ಮತ್ತು ಬೃಹತ್ ನೇರ ಜಾಲಗಳ ನಿರ್ವಹಣೆಗೆ ಚೌಕಟ್ಟನ್ನು ನಿರ್ಮಿಸುವುದು
 • ಪರಿವಿಡಿಯ ಅಭಿವೃದ್ಧಿ
 • ಬೃಹತ್ ನೇರ ಜಾಲಗಳ ಆರಂಭ
ಸಾರ್ವಜನಿಕ ಸೇವಾ ಸಂಸ್ಥೆಯಿಂದ ಆರ್ಗ್ಯಂ ಸಂಸ್ಥೆಯು ಭಾರತೀಯ ಜಲ ಬೃಹತ್ ನೇರ ಜಾಲವನ್ನು ಅಭಿವೃದ್ಧಿಪಡಿಸಿದೆ. ಈ ಕೆಲಸ ಜನವರಿ 2006ರಲ್ಲಿ ಪ್ರಾರಂಭವಾಗಿದೆ ಹಾಗೂ ಡಿಸೆಂಬರ್ 2006ರಲ್ಲಿ ಆರಂಭವಾಗಲಿದೆ.

ಜಲವಲಯದ ಬಗ್ಗೆ ಮಾಹಿತಿ ಮತ್ತು ಜ್ಞಾನವನ್ನು ಒದಗಿಸುವ ಒಂದು ಮುಕ್ತ ಬೃಹತ್ ನೇರ ಜಾಲವಾಗಿದೆ. ಈ ಬೃಹತ್ ನೇರಜಾಲದ ಪ್ರಾಥಮಿಕ ಉದ್ದೇಶಗಳು ಯಾವುವೆಂದರೆ :
 1. ಜಲ ನಿರ್ವಹಣೆಯ ಬಗ್ಗೆ ತಿಳುವಳಿಕೆ ಮತ್ತು ವಿವಿಧ ಅಂಶಗಳನ್ನು ಸಾಮಾನ್ಯ ಪ್ರೇಕ್ಷಕರಿಗೆ ಪರಿಚಯಿಸುವುದು
 2. ಶ್ರದ್ಧಾವಂತ ಬಳಕೆದಾರರ ನಡುವೆ ಯಶಸ್ವೀ ತಂತ್ರಗಳು ಹಾಗೂ ಅನುಭವಗಳ ಹಂಚಿಕೆ.
 3. ವಿವಿಧ ಶೇರುದಾರರ ನಡುವೆ ಮಾಹಿತಿಯ ಹರಿಯುವಿಕೆಗೆ ವೇದಿಕೆ ಒದಗಿಸುವುದು.
ಈ ನೆಲೆಯಲ್ಲೇ ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು ಅಭಿವೃದ್ಧಿಪಡಿಸುವುದು. ಶಕ್ತಿ ಬೃಹತ್ ನೇರ ಜಾಲ ಮಂಡಲಿಯ ಕಾರ್ಯಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ.

 1. ಶಕ್ತಿಯ ಮೂಲಭೂತ ಅಂಶಗಳ ಮೂಲಗಳ ಗುರುತಿಸುವಿಕೆ ಮತ್ತು ಅಗತ್ಯ ಜ್ಞಾನವನ್ನು ಒದಗಿಸುವುದು.
 2. ಅಂಕಿ ಸಂಖ್ಯೆ ಮತ್ತು ಮಾಹಿತಿಯನ್ನು ವಿಸ್ತಾರವಾಗಿ ಒದಗಿಸುವುದು.
 3. ಮಾಹಿತಿಯನ್ನು ಶಕ್ತ ಹಾಗೂ ಪರಿಣಾಮಕಾರಿಯಾಗಿ ಸರಿಪಡಿಸುವುದು.
 4. ಜ್ಞಾನ ಭಂಡಾರದ ಸಂರಕ್ಷಣೆ ಮತ್ತು ನವೀಕರಣ.
 5. ಚರ್ಚೆಗೆ ಮತ್ತು ವಿಷಯ ವಿನಿಮಯಕ್ಕೆ ಒಂದು ವೇದಿಕೆ ಒದಗಿಸುವುದು
ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್ಇ)ದಿಂದ ಬಂದ ಭಾರತ ಪರಿಸರ ಬೃಹತ್ ನೇರ ಜಾಲ ಅಭಿವೃದ್ಧಿಯ ಪ್ರಸ್ತಾಪವನ್ನು ಎನ್.ಕೆ.ಸಿ.ಯು ಗಮನಿಸುತ್ತಿದೆ

ಭಾರತ ಪರಿಸರ ಮತ್ತು ಪ್ರಜಾಹಕ್ಕು ಬೃಹತ್ ನೇರ ಜಾಲದ ಅಭಿವೃದ್ಧಿಗೆ ಪ್ರಾಥಮಿಕ ಕೆಲಸಗಳೂ ಪ್ರಾರಂಭವಾಗಿವೆ. ಪ್ರಮುಖ ಸಂಸ್ಥೆಗಳನ್ನು ಗುರುತಿಸಲಾಗಿದೆ.