ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಜಾಲಗಳು

1. ಜ್ಞಾನ ಜಾಲ

ಗುಣಮಟ್ಟದ ತರಬೇತಾದ ಸಿಬ್ಬಂದಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ತಯಾರಿಸುವ ಪರೀಕ್ಷೆಯನ್ನು ಎದುರಿಸಲು ವಿಸ್ತ್ರುತ ಶೈಕ್ಷಣ ಸೌಲಭ್ಯಗಳು ಮತ್ತು ಸಂಪನ್ಮೂಲಗಳು ಅವಶ್ಯಕ. ಸೂಕ್ತ ಸಂಶೋಧನಾ ಸೌಲಭ್ಯವಿರುವ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಹೊಂದುವ ಅವಶ್ಯಕತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಸ್ಪರ್ಧೆಯನ್ನು ಗೆಲ್ಲಲ್ಲು, ಪ್ರಸ್ತುತ ಸೀಮಿತ ಸಂಖ್ಯೆಯ ಉತ್ತಮ ಸಂಸ್ಥೆಗಳಲ್ಲಿ ಲಭ್ಯವಿರುವ ಶಿಕ್ಷಣ ಸಾಮಗ್ರಿಗಳು, ಸಾಧನಗಳು ಮತ್ತು ಸೌಲಭ್ಯಗಳನ್ನು, ದೇಶದಾದ್ಯಂತ ಇರುವ ಬಹು ಸಂಖ್ಯೆಯ ವಿಶ್ವವಿದ್ಯಾನಿಲಯಗಳು ಮತ್ತು ತಾಂತ್ರಿಕ, ಕೃಷಿ ಮತ್ತು ವೈದ್ಯಕೀಯ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕು. ಇದರ ಜೊತೆಗೆ, ಪ್ರಪಂಚದಾದ್ಯಂತ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಅಂತರ್ ಸಂಸ್ಥೆಗಳು ಮತ್ತು ಅಂತರ್ದೇಶೀಯ ಸಹಯೋಗದೊಂದಿಗೆ ಹೆಚ್ಚಾಗಿ ನಡೆಸಬೇಕು. ತೀವ್ರ ಗಣಕೀಕೃತ ಮತ್ತು ವಿಷಯ ಸಂಶೋಧನಾ ಸಮಸ್ಯೆಗಳಲ್ಲಿ ಇದು ಅವಶ್ಯಕವಾಗುತ್ತಿದೆ. ಈ ನಿಟ್ಟಿನಲ್ಲಿ ಪರ್ಯಾಲೋಚನೆಗಳು, ವಿಷಯ ಮತ್ತು ಸಂಪನ್ಮೂಲ ಹಂಚಿಕೆಯು ಪ್ರಮುಖ ಸಾಮಗ್ರಿಗಳಾಗಿವೆ. ಆದ್ದರಿಂದ ಭಾರತೀಯ ಸಂಶೋಧಕರಿಗೆ ಈ ರೀತಿಯ ಸಹಯೋಗ ಪ್ರಯತ್ನಗಳನ್ನು ಅವಶ್ಯಕ ಸೌಲಭ್ಯಗಳನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದು ಅವಶ್ಯಕ. ಆರ್ ಮತ್ತು ಡಿ ಸೌಲಭ್ಯಗಳು ಮತ್ತು ವಿಷಯದ ಹಂಚಿಕೆಯು 80ರ ದಶಕದಿಂದ ಯೂರೋಪಿನಲ್ಲಿ ಜನಪ್ರಿಯವಾಗಿದೆ ಮತ್ತು ಆಗಿನಿಂದ ಪ್ರಪಂಚದ ಇತರ ದೇಶಗಳೂ ಇದನ್ನು ಅನುಸರಿಸುತ್ತಿದೆ, ಹಾಗೂ ಭಾರತಕ್ಕೆ ಉತ್ತಮ ಪರಿಹಾರವನ್ನು ಒದಗಿಸಿದೆ.

ಈ ಸನ್ನಿವೇಶದಲ್ಲಿ ರಾಷ್ಟ್ರೀಯ ಜ್ಞಾನ ಆಯೋಗವು ಒಂದು ಯೋಜನೆಯನ್ನು ತೆಗೆದುಕೊಂಡು, ಎಲ್ಲಾ ವಿಶ್ವವಿದ್ಯಾನಿಲಯಗಳು, ಆರ್ ಮತ್ತು ಡಿ ಸಂಸ್ಥೆಗಳು, ಎಸ್ ಮತ್ತು ಟಿ ಸಂಸ್ಥೆಗಳನ್ನು ಅಂತರ್ ಸಂಪರ್ಕಗೊಳಿಸುವ ಸಮರ್ಥ ಮತ್ತು ಪರಿಣಾಮಕಾರಿ ಜಾಲದ ವಿನ್ಯಾಸದ ಸಾಧ್ಯತೆಗಳನ್ನು ಹುಡುಕುತ್ತಿದೆ. ಈ ದೇಶದಲ್ಲಿನ ಆರೋಗ್ಯ ಸೇವಾ ಸೌಲಭ್ಯಗಳು, ಕೃಷಿ ಸಂಶೋಧನೆ ಮತ್ತು ವಿಸ್ತ್ರುತ ಸಂಸ್ಥೆಗಳು ಮತ್ತು ಗ್ರಂಥಾಲಯಗಳ (ಹಲವು ಸಾವಿರ ನೋಡ್ ಗಳಲ್ಲಿ)ನ್ನು ಕಡಿಮೆ ಪಕ್ಷ 100 ಎಂ.ಬಿ.ಪಿ.ಎಸ್ ವೇಗದಲ್ಲಿ ಪ್ರವೇಶ. ಡಾ׀׀ ಡಿ.ಪಿ.ಎಸ್.ಸೇತ್ ಅವರು ಎನ್.ಕೆ.ಸಿ.ಯ ಬಾಹ್ಯ ತಜ್ಞರಾಗಿ ಈ ವಿಷಯದ ಬಗ್ಗೆ ಚೌಕಟ್ಟನ್ನು ತಯಾರಿಸಿದ್ದಾರೆ. ಈ ವರದಿಯು ಈಗ ಸೂಕ್ತ ಪಾಲುದಾರರಲ್ಲಿ ಹೆಚ್ಚು ಪ್ರಸರಣವಾಗುತ್ತಿದೆ ಮತ್ತು ಹಿಂಪಡೆವ ಉತ್ತರ ಮತ್ತು ಸಲಹೆಗಳನ್ನು ಸೇರಿಸಿ ಎನ್.ಕೆ.ಸಿ.ಯು ಈ ವಿಷಯದ ಬಗ್ಗೆ ಸೂಚನೆಗಳನ್ನು ಅಂತಿಮಗೊಳಿಸುತ್ತಿದೆ.

2. ಆರೋಗ್ಯ ಮಾಹಿತಿ ಜಾಲ.

ಭಾರತದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವಾ ವಿತರಣೆಯನ್ನು ಹೆಚ್ಚಿಸಲು ಒಂದು ನಂಬಿಕೆಯ, ವೇಗದ, ನೈಜ ಸಮಯದ ಆರೋಗ್ಯ ವಿಷಯ ಸಂಗ್ರಹಣಾ ಪದ್ಧತಿ ಅವಶ್ಯಕವಾಗಿದೆ. ಜೊತೆಗೆ ಆರೋಗ್ಯ ವಿಷಯ ಸಂಗ್ರಹಣೆ ಮತ್ತು ವಿತರಣೆಯನ್ನು ಸ್ವತಂತ್ರವಾಗಿ ಬೆಳೆದ ಆರೋಗ್ಯ ರಕ್ಷಣಾ ಸಂಸ್ಥೆಗಳು ರಚಿಸಬಹುದು, ಇದರಲ್ಲಿ ಅಂತರ್ ಬಳಕೆಯ ಕೊರತೆಯಿಂದ ಆರೋಗ್ಯ ರಕ್ಷಣೆಯ ಬೆಲೆ ದುಬಾರಿಯಾಗುತ್ತದೆ. ಆದ್ದರಿಂದ ಆರೋಗ್ಯ ಜಾಲವು ಇವುಗಳ ಹಕ್ಕನ್ನು ಪಡೆಯಬೇಕು ಮತ್ತು ಪ್ರಪಂಚದಲ್ಲಿ ಪ್ರೌಢ ಆರೋಗ್ಯ ರಕ್ಷಣಾ ಪದ್ಧತಿಯು ಎದುರಿಸುತ್ತಿರುವ ಇತರೆ ಸಮಸ್ಯೆಗಳನ್ನು ಎದುರಿಸಬಹುದು.

ಇದನ್ನು ಗಮನಿಸಿ, ರಾಷ್ಟ್ರೀಯ ಜ್ಞಾನ ಆಯೋಗವು ಈ ಕ್ಷೇತ್ರದ ತಜ್ಞರನ್ನು ಒಳಗೊಂಡ ಒಂದು ಕಾರ್ಯನಿರತ ಗುಂಪನ್ನು, ಆರೋಗ್ಯ ಮಾಹಿತಿ ಜಾಲದ ಮೇಲೆ ರಚಿಸಿದೆ. ಈ ಗುಂಪು, ವಿಸ್ತ್ರುತ ಚರ್ಚೆ ಪ್ರಕ್ರಿಯೆಯನ್ನು ನಡೆಸುತ್ತದೆ. ಮತ್ತು ಐಟಿ ಅವಶ್ಯಕತೆ ಮತ್ತು ಚಿಕಿತ್ಸಾ ಗುಣಮಟ್ಟ ವಿಷಯಗಳನ್ನು ಗಮನಿಸುತ್ತದೆ. ಮತ್ತು ರಾಷ್ಟ್ರ ಮಟ್ಟದ, ಜಾಲ-ಅವಲಂಬಿತ, ಸುರಕ್ಷಿತ ವಿದ್ಯುನ್ಮಾನ ಆರೋಗ್ಯ ಮಾಹಿತಿ ಪದ್ಧತಿ ಸ್ಥಳಗಳಲ್ಲಿ ನಿಯಂತ್ರಿತ ಚೌಕಟ್ಟನ್ನು ನಿರ್ಮಿಸುತ್ತಿದೆ. ಕಾರ್ಯನಿರತ ಗುಂಪು ತಮ್ಮ ಮೊದಲ ಸಭೆಯನ್ನು 21ನೇ ಆಗಸ್ಟ್ 2006ರಲ್ಲಿ ನಡೆಸಿತು.


More Networks links: ಸಲಹೆಗಳು     ಪರ್ಯಾಲೋಚನೆ