ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಸಾಕ್ಷರತೆ

ಸಾಕ್ಷರತೆ

ರಾಷ್ಟ್ರೀಯ ಸಾಕ್ಷರತಾ ಮಿಷನ್ (ಎನ್ ಎಲ್ ಎಮ್)ನ್ನು 1988ರಲ್ಲಿ ಪ್ರಾರಂಭಿಸಲಾಯಿತು,2007 ವೇಳೆಗೆ 15-35 ವಯೋಗುಂಪಿನ ಅನಕ್ಷರಸ್ಥರಿಗೆ ಶೇಕಡಾ 75 ವ್ಯವಹಾರಿಕ ಸಾಕ್ಷರತೆ ನೀಡುವುದು ಇದರ ಉದ್ದೇಶ. ಸ್ಥಳೀಯವಾಗಿ ಆಯೋಜಿಸುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಕೂಡಿಸುವುದು ಮತ್ತು ಸಾಕ್ಷರತೆಯನ್ನು ವಿಸ್ತ್ರತ ಕಾರ್ಯಕ್ರಮವಾದ ಸಾಮಾಜಿಕ ಶಿಕ್ಷಣ ಮತ್ತು ಜಾಗೃತಿಯೊಂದಿಗೆ ಮಿಳಿತಗೊಳಿಸುವುದು. 2001ರ ಜನಗಣತಿಯು ದೇಶದ ಸಾಕ್ಷರತೆಯ ಮಟ್ಟವು, 1991ರಲ್ಲಿ 52.21 % ರಿಂದ 65.38% ಗೆ ಏರಿರುವುದನ್ನು ತೋರಿಸುತ್ತದೆ. ಈ ದಶಕದಲ್ಲಿ ಪ್ರಥಮ ಬಾರಿಗೆ ಅನಕ್ಷರಸ್ಥರ ಸಂಖ್ಯೆಯು 329 ಮಿಲಿಯನ್ ನಿಂದ 304 ಮಿಲಿಯನಿಗೆ ಇಳಿದಿದೆ. ಆದಾಗ್ಯೂ, ದೇಶದ ಸರಾಸರಿಯು ಅನೇಕ ಅಸಮತೆ ಮತ್ತು ಅನಕ್ಷರತೆಯ ಮುಖವಾಡ ಧರಿಸಿದೆ. ಮತ್ತು ಈ ಭಿನ್ನತೆಯು ಧರ್ಮ,ಜಾತಿ, ಲಿಂಗ ಇತ್ಯಾದಿ ಅನೇಕ ಅಂಶಗಳ ಮೇಲೆ ಅವಲಂಬಿಸಿದೆ. ಹಾಗೂ ಸಮಸ್ಯಾತ್ಮಕವಾಗಿ ಮುಂದುವರೆದಿದೆ. ಒಟ್ಟು ಅನಕ್ಷರಸ್ಥ ಸಂಖ್ಯೆ ಅಗಣಿತವಾಗಿ ಮುಂದುವರೆದಿದೆ ಮತ್ತು ಜ್ಞಾನ ಸಮಾಜವಾಗಬೇಕೆಂದಿರುವ ಯಾವುದೇ ದೇಶವು ಇಷ್ಟು ದೊಡ್ಡ ಸಂಖ್ಯೆಯ ಪ್ರಜೆಗಳನ್ನು ಅನಕ್ಷರಸ್ಥರಾಗಿ ಉಳಿಯಲು ಬಿಡುವುದಿಲ್ಲ.

ರಾಷ್ಟ್ರೀಯ ಜ್ಞಾನ ಆಯೋಗದ ಗಮನದಲ್ಲಿ ಇರುವ ಕೆಲವು ಅಂಶಗಳು :
  • ರಾಷ್ಟ್ರೀಯ ಸಾಕ್ಷರತೆಯ ಮರುಮೌಲ್ಯಮಾಪನ
  • ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಐಸಿಟಿಯ ಬಳಕೆ ಮತ್ತು ಗಣಕೀಕೃತ ಕಲಿಕೆಯಂಥ ಮಾರ್ಗಗಳನ್ನು ಪ್ರಾರಂಭಿಕ ಸಾಕ್ಷರತೆಗೆ ಬಳಸುವುದು
  • ವಸ್ತು ಅಭಿವೃದ್ಧಿ ಮತ್ತು ತರಬೇತಿ
  • ಸಾಹಿತ್ಯದಲ್ಲಿ ಪ್ರಾರಂಭಿಕ ಮತ್ತು ನವೀನ ಪದ್ಧತಿಗಳಲ್ಲಿ ಹೊಸ ಭಾವನೆಗಳು
  • ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ಪದ್ಧತಿಯಲ್ಲಿ ಸಮಾನತೆ

More Literacy links: ಪರ್ಯಾಲೋಚನೆ