ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶ | ಕಾನೂನು ಶಿಕ್ಷಣ

ಕಾನೂನು ಶಿಕ್ಷಣ

ಕಾನೂನು ಶಿಕ್ಷಣವು ವೃತ್ತಿ ಶಿಕ್ಷಣದ ಒಂದು ಅಂಶವಾಗಿ ಸಾಕಷ್ಟು ಮಹತ್ವವನ್ನು ಪಡೆದಿದೆ. ಕೇವಲ ಚಾರಿತ್ರಿಕ ಉಪಯೋಗವಾಗಿ ಮಾತ್ರವಲ್ಲದೆ ಪ್ರಸ್ತುತ ಜಾಗತೀಕರಣದ ಅಂಶವಾಗಿಯೂ ಮಹತ್ವ ಪಡೆದಿದೆ. ಜ್ಞಾನದ ಪರಿಕಲ್ಪನೆ ಮತ್ತು ಸಮಾಜದಲ್ಲಿ ಅದರ ಬಳಕೆಗೆ ಕಾನೂನು ಶಿಕ್ಷಣವು ಮಹತ್ವದ ಸಂಬಂಧ ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ಶಿಕ್ಷಣ, ವ್ಯಾಜ್ಯ, ಆಡಳಿತ ಅಭ್ಯಾಸ, ಸರ್ಕಾರ ಮತ್ತು ನಾಗರೀಕ ಸಮಾಜದಲ್ಲಿ ತರಬೇತಾದ ಕಾನೂನು ಸಿಬ್ಬಂದಿಯ ಅವಶ್ಯಕತೆ ಗಣನೀಯವಾಗಿ ಹೆಚ್ಚಾಗಿದೆ. ಮತ್ತು ಮುಂಬರುವ ವರ್ಷಗಳಲ್ಲಿ ತರಬೇತಾದ ಸಿಬ್ಬಂದಿಯ ಬೇಡಿಕೆಯು ಖಂಡಿತವಾಗಿ ಹೆಚ್ಚಾಗುವ ಸಾಧ್ಯತೆಯನ್ನು ಅಂದಾಜು ಮಾಡಲಾಗಿದೆ. ಆದ್ದರಿಂದ ಭಾರತದಲ್ಲಿ ಕಾನೂನು ಶಿಕ್ಷಣದ ಬಗ್ಗೆ ಒಂದು ಸ್ಪಷ್ಟ ದೃಷ್ಟಿಕೋನವನ್ನು ರಚಿಸುವ ಅವಶ್ಯಕತೆಯಿದೆ. ಇಂತಹ ದೃಷ್ಟಿಕೋನವು ನಿರಂತರ ಬದ್ದತೆಯಿಂದ ದಾರಿ ತೋರಿಸಬಹುದು.

ರಾಷ್ಟ್ರೀಯ ಜ್ಞಾನ ಆಯೋಗವು, ಕಾನೂನು ಶಿಕ್ಷಣದಲ್ಲಿ ಹಲವು ಮುಂಚೂಣಿ ಅಭ್ಯಾಸಿಗರನ್ನು ಮತ್ತು ಶಿಕ್ಷಕರೊಡನೆ ಪರ್ಯಾಲೋಚಿಸುತ್ತಿದೆ. ಗಮನದಲ್ಲಿರುವ ಕೆಲವು ಪ್ರಮುಖ ಕ್ಷೇತ್ರಗಳು:
  • ಗುಣಮಟ್ಟದ ಕಾನೂನು ಶಿಕ್ಷಣಕ್ಕೆ ಪ್ರವೇಶ
  • ಕೌಶಲ್ಯಪೂರಿತ ಅಧ್ಯಾಪಕರನ್ನು ಆಕರ್ಷಿಸುವ ಮತ್ತು ಉಳಿಸಿಕೊಳ್ಳುವ ವಿಧಾನಗಳು
  • ಪಠ್ಯಕ್ರಮದ ನಿರಂತರ ಅಭಿವೃದ್ಧಿ ಮಾರ್ಗಗಳ ಗುರುತಿಸುವಿಕೆ
  • ಸವಲತ್ತುಗಳು ಮತ್ತು ಆಡಳಿತಾತ್ಮಕ ವಿಷಯಗಳಿಗೆ ನವೀನ ಪದ್ಧತಿಯ ಪರಿಹಾರಗಳನ್ನು ಹುಡುಕುವುದು
  • ನಿಯಂತ್ರಣಾ ವಿಷಯಗಳು
  • ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾದ ಗಂಭೀರ ಸಂಶೋಧನಾ ಪರಂಪರೆಯ ಅಭಿವೃದ್ಧಿ
  • ಸಮಾಜ ಮತ್ತು ಆರ್ಥಿಕ ವ್ಯವಸ್ಥೆಯ ವಿವಿಧ ವಿಭಾಗಗಳ ಅವಶ್ಯಕತೆಗಳ ಪೂರೈಕೆಗೆ ಬೆಂಬಲವಾಗುವ ಕಾನೂನು ಶಿಕ್ಷಣ ಸಂಸ್ಕೃತಿಯ ರಚನೆ ಮಾಡುವುದು

More Legal Education links: ಪರ್ಯಾಲೋಚನೆ