ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಭಾಷೆ

ಭಾಷೆ

ಭಾರತದಂತಹ ಬಹು ಭಾಷಾದೇಶದಲ್ಲಿ ಭಾಷೆಯು ಕೇವಲ ಸಂವಹನ ಮಾಧ್ಯಮವಾಗದೆ, ಪ್ರವೇಶವನ್ನು ನಿಷ್ಕರ್ಷಿಸುತ್ತದೆ. ಇಂಗ್ಲೀಷ್ ಭಾಷೆಯನ್ನು ಅರ್ಥೈಸುವುದು ಮತ್ತು ಅದರ ಹಿಡಿತವು ಉನ್ನತ ಶಿಕ್ಷಣ, ಉದ್ಯೋಗ ಸಾಧ್ಯತೆಗಳು ಮತ್ತು ಸಾಮಾಜಿಕ ಅವಕಾಶಗಳಿಗೆ ಬಹು ಮುಖ್ಯ ಪ್ರವೇಶ ಅಂಶವಾಗುತ್ತದೆ. ಇಂಗ್ಲೀಷಲ್ಲಿ ಸೂಕ್ತ ತರಬೇತಿ ಪಡೆಯದ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಯೂವಾಗಲೂ ಅಸಮರ್ಥರಾಗುತ್ತಾರೆ. ಇಂಗ್ಲೀಷ್ ಭಾಷೆಯನ್ನು ಸಾಕಷ್ಟು ತಿಳಿಯದವರು, ನಮ್ಮ ಮುಂಚೂಣಿ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಸ್ಪರ್ಧಿಸಲು ಅತ್ಯಂತ ಕಷ್ಟ ಪಡುತ್ತಾರೆ. ಈ ಅನಾನುಕೂಲತೆಯು ಕೆಲಸದ ಕ್ಷೇತ್ರದಲ್ಲಿ ಇನ್ನೂ ಗಾಢವಾಗುತ್ತದೆ. ಕೇವಲ ವೃತ್ತಿಗಳಲ್ಲದೆ ಬಿಳಿ ಕಾಲರ್ ಕೆಲಸಗಳಲ್ಲಿ ತೊಡಕಾಗುತ್ತದೆ.

ಈ ಸನ್ನಿವೇಶದಲ್ಲಿ ರಾಷ್ಟ್ರೀಯ ಜ್ಞಾನ ಆಯೋಗವು, ರಾಜ್ಯ ಸಚಿವರುಗಳು. ಸಂಸತ್ತಿನ ಸದಸ್ಯರುಗಳು, ವೈದ್ಯಕೀಯ, ಕಾನೂನು ಮತ್ತು ಸಾರ್ವಜನಿಕ ಸಂಘ, ಸಂಸ್ಥೆಗಳಲ್ಲಿನ ಜನರನ್ನೂ ಒಳಗೊಂಡಂತೆ ಸರ್ಕಾರ, ಶೈಕ್ಷಣ, ಮಾಧ್ಯಮ ಮತ್ತು ಕೈಗಾರಿಕೆಯಲ್ಲಿನ ಜನರಿಗೆ ಅನೌಪಚಾರಿಕ ಪರ್ಯಾಲೋಚನೆಯಲ್ಲಿ ತೊಡಗಿದೆ. ಇಂಗ್ಲೀಷ್ ಭಾಷಾ ಬೋಧನೆಯನ್ನು ಶಿಕ್ಷಣದ ಎಲ್ಲಾ ಹಂತಗಳಲ್ಲೂ ಬೋಧಿಸಲು ಒಂದು ನಮೂನೆಯನ್ನು ತಯಾರಿಸಲು ಒಂದು ಕಾರ್ಯನಿರತ ಗುಂಪನ್ನು ಆಯೋಗವು ರಚಿಸಿದೆ. ಕಾರ್ಯನಿರತ ಗುಂಪಿನ ವರದಿ ಮತ್ತು ವಿಸ್ತ್ರುತ ಪರ್ಯಾಲೋಚನೆಗಳ ಆಧಾರದ ಮೇಲೆ ಆಯೋಗವು ತನ್ನ ಸಲಹೆಗಳನ್ನು ಒಪ್ಪಿಸಿದೆ. ಈ ಸಲಹೆಗಳು ಸ್ಥೂಲವಾಗಿ, ಇಂಗ್ಲೀಷ್ ನ ಪರಿಚಯದ ಮಟ್ಟ, ಶಿಕ್ಷಕ, ಸೂಕ್ತ ಪಠ್ಯಪುಸ್ತಕಗಳು, ಶಿಕ್ಷಕ ತರಬೇತಿ, ತಕ್ಕ ಸಂಪನ್ಮೂಲಗಳ ಬೆಂಬಲ (ಶಿಕ್ಷಕ ಮತ್ತು ಸಾಮಗ್ರಿಗಳು) ಮತ್ತು ಭಾಷಾ ಕಲಿಕೆಯಲ್ಲಿ ಐಸಿಟಿಯ ಉಪಯೋಗಕ್ಕೆ ಸಂಬಂಧಿಸಿದೆ.


More Language links: ಸಲಹೆಗಳು