ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶಗಳು | ಭೌದ್ಧಿಕ ಆಸ್ಥಿಯ ಹಕ್ಕುಗಳು (ಐಪಿಆರ್)

ಭೌದ್ಧಿಕ ಆಸ್ಥಿಯ ಹಕ್ಕುಗಳು (ಐಪಿಆರ್)

ಇಂದಿನ ಜ್ಞಾನ ಅರ್ಥ ವ್ಯವಸ್ಥೆ ಮತ್ತು ಸಮಾಜಗಳು, ವಿಶೇಷವಾಗಿ ಆರ್ಥಿಕ ಜಾಗತೀಕರಣದಲ್ಲಿ ಐಪಿಆರ್ ಗಳು ಒಂದು ಅವಿಭಾಜ್ಯ ಸಾಧನವಾಗಿ ಹೊರಹೊಮ್ಮಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಬ್ಬರ ಸ್ಪರ್ಧಾ ಶಕ್ತಿಯು, ಹೊಸ ಕಲ್ಪನೆಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಪದ್ಧತಿಯ ಆಚರಣೆಯ ಮೂಲಕ ತಿಳಿಯುವುದು ಮತ್ತು ಅಂಥಹ ವಿಷಯಗಳನ್ನು ಸಂಪತ್ತು ವೃದ್ಧಿ ಸಾಮಗ್ರಿಗಳಾಗಿ ಪರಿವರ್ತಿತಗೊಳಿಸುವ ಸಾಮರ್ಥ್ಯದ ಮೇಲೆ ಅವಲಂಬಿಸಿದೆ. ನಿಯಮಿತ ಅವಧಿಗೆ ತನ್ನ ಮಾಲೀಕನಿಗೆ ಏಕಸ್ವಾಮ್ಯ ಹಕ್ಕನ್ನು ಐಪಿಆರ್ ನೀಡುತ್ತದೆ. ಹೊಸ ಪದ್ಧತಿಯ ಆಚರಣೆಗೆ ಭತ್ಯೆಯನ್ನು ರಚಿಸುವ ಮತ್ತು ಆರ್ಥಿಕ ಮೌಲ್ಯದ ಉತ್ಪಾದನೆಗೆ ಇದು ಒಂದು ಪ್ರಮುಖ ಅಂಶವಾಗಿ ಹೊರಹೊಮ್ಮಿದೆ. ಒಂದು ಪರಿಣಾಮಕಾರಿ ಐಪಿಆರ್ ಪದ್ಧತಿಯು ಕಾನೂನು ಪರಿಸರದಲ್ಲಿ ನಂಬಿಕೆಗೆ ಅರ್ಹವಾಗಿ ಸ್ಥಾಪಿತವಾಗಿದೆ. ಇದು ವಿದೇಶಿ ಬಂಡವಾಳ ಮತ್ತು ತಾಂತ್ರಿಕ ವರ್ಗಾವಣೆ ನಿರ್ಧಾರಗಳಲ್ಲಿ ಮುಖ್ಯ ಅಂಶವಾಗಿದೆ.

ಈ ವಿಷಯದ ಪ್ರಮುಖ ಅಂಶಗಳು:
  • ಕರಾರು ಹಕ್ಕುಗಳು ಮತ್ತು ಕಾಪಾಡಿಕೊಂಡು ಬಂದಿರುವ ಅವಶ್ಯಕ ಕಾನೂನುಗಳನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿಸುವುದು.
  • ಕಾನೂನಿಗೆ ಗೌರವ
  • ಜಾರಿಗೊಳಿಸಲು ಪರಿಣಾಮಕಾರಿಯಾದ ಕಾನೂ-ನು ವ್ಯವಸ್ಥೆಯ ಅಭಿವೃದ್ಧಿ
  • ನಿಖರವಾದ ಮತ್ತು ವಿವರವಾದ ತಕ್ಷಣ ಉಪಯೋಗಿಸಬಹುದಾದ ಐಪಿಆರ್ ಸಮಾಚಾರದ ಲಭ್ಯತೆ; ವಿವಿಧ ವಿಭಾಗಗಳಲ್ಲಿ ಐಪಿಆರ್ ಉದ್ಯೋಗಿಗಳಿಗೆ ನಿರಂತರ ತರಬೇತಿಗೆ ಅವಕಾಶ
  • ವಿವಿಧ ಐಪಿಆರ್ ಕಛೇರಿಗಳಲ್ಲಿ ಮಾನವ ಸಂಪನ್ಮೂಲವೂ ಸೇರಿದಂತೆ ನವೀನ ಅನುಕೂಲತೆಗಳ ರಚನೆ ಮತ್ತು ಅಭಿವೃದ್ಧಿ
  • ವಿವಿಧ ಐಪಿಆರ್ ಕಛೇರಿಗಳ ಆಡಳಿತ ನಿಯಮಗಳ ಹೊಂದಾಣಿಕೆ ಮತ್ತು ವ್ಯವಸ್ಥೆ ಮತ್ತು ಅತ್ಯಂತ ಅರ್ಥವತ್ತಾಗಿ,
  • ಮಾರುಕಟ್ಟೆಯ ಬೇಡಿಕೆ ಮತ್ತು ಪ್ರತಿಫಲನಕ್ಕೆ ಸಂಬಂಧಪಟ್ಟ ಎಲ್ಲಾ ಜ್ಞಾನದ ರಚನೆ, ಉಪಯೋಗ ಮತ್ತು ಪ್ರಚಾರದ ಪ್ರಕ್ರಿಯೆಯಲ್ಲಿ ಐಪಿಆರ್ ಸಂಸ್ಕೃತಿಯ ಅಭಿವೃದ್ಧಿ