ರಾಷ್ಟ್ರೀಯ ಜ್ಞಾನ ಆಯೋಗ
ಭಾರತ ಸರ್ಕಾರ
  


ನವ
ಭಾರತೀಯ ಶಕ್ತಿ ಬೃಹತ್ ನೇರ ಜಾಲವನ್ನು
ಭಾರತೀಯ ಜಲ ಬೃಹತ್ ನೇರ ಜಾಲವನ್ನು

ನವ ಸಲಹೆಗಳು

  ಭಾಷೆ
  English
  हिन्दी
  বাংলা
  മലയാളം
  অসমীয়া
  ارد و
  தமிழ்
  नेपाली
  মণিপুরী
  ଓଡ଼ିଆ
  ગુજરાતી
ಕೇಂದ್ರೀಕೃತ ಪ್ರದೇಶ | ಕೇಂದ್ರೀಕೃತ ಪ್ರದೇಶ

ಕೇಂದ್ರೀಕೃತ ಪ್ರದೇಶ

ನಾಗರೀಕರು ಸರ್ಕಾರದೊಡನೆ ಕಲೆಯುವ ಅನೇಕ ಅಂಶಗಳನ್ನು ಸರಳೀಕರಿಸುವ ಸಾಮರ್ಥ್ಯ ಹೊಂದಿದೆ. ಇದು ಶೀಘ್ರ ವಿಲೇವಾರಿ, ಉತ್ಪಾದಕತೆ ಮತ್ತು ಸೇವೆಗಳ ಸಾಮರ್ಥ್ಯ ನಾಗರೀಕ ಕೇಂದ್ರೀಯವಾಗಿ ಮಾಡುತ್ತದೆ ಮತ್ತು ಸೂಕ್ತ ಜನರು ಸೌಲಭ್ಯಗಳನ್ನು ಪಡೆಯುವಂತೆ ಖಾತರಿಗೊಳಿಸು-ತ್ತದೆ.

ಇ-ಪ್ರಶಾಸನದ ಕೆಲವು ಉಪಯೋಗಗಳು :
  • ಸಾರ್ವಜನಿಕ ಸೇವೆಗಳು ಬೆಲೆಯನ್ನು ಕಡಿಮೆಗೊಳಿಸುವುದು ಮತ್ತು ತಲುಪುವಿಕೆ ಮತ್ತು ಗುಣಮಟ್ಟದ ಉತ್ತಮಪಡಿಸುವಿಕೆ
  • ಕೆಲಸದ ಬೆಲೆ ಮತ್ತು ಸಮಯದಲ್ಲಿ ಕಡಿತ.
  • ನಾಗರೀಕ ಸಬಲೀಕರಣ ಮತ್ತು ಪಾರದರ್ಶಕತ್ವದ ಹೆಚ್ಚಳ
  • ಹೆಚ್ಚಿನ ಸಾಮರ್ಥ್ಯ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಪುನರ್-ತಾಂತ್ರಿಕಗೊಳಿಸುವುದು
ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಇ-ಪ್ರಶಾಸನ ಪ್ರಯತ್ನಗಳ ಬಗ್ಗೆ ಚರ್ಚೆ ಮತ್ತು ಪರಾಮರ್ಶೆಗಳನ್ನು ನಡೆಸಿದ ರಾಷ್ಟ್ರೀಯ ಜ್ಞಾನ ಆಯೋಗವು, ಇ-ಪ್ರಶಾಸನ ಅಧ್ಯಯನಕ್ಕೆ ಒಂದು ವಿಶೇಷ ಗುಂಪನ್ನು ರಚಿಸಿತು. ಈ ಗುಂಪಿನ ವರದಿಯನ್ನು ಯೋಜನಾ ಆಯೋಗದಲ್ಲಿ ಚರ್ಚಿಸಲಾಯಿತು ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಮತ್ತು ಸಚಿವ ಸಿಬ್ಬಂದಿಗೆ ಒಪ್ಪಿಸಲಾಯಿತು. ತದನಂತರ ಆಡಳಿತಾತ್ಮದ ಪುನರ್ರಚನಾ ಆಯೋಗವೂ ಸೇರಿದಂತೆ ಇತರೆ ಪಾಲುದಾರರೊಂದಿಗೆ ಅನೇಕ ಚರ್ಚೆಗಳನ್ನು ನಡೆಸಲಾಯಿತು. ಈ ಚರ್ಚೆಗಳ ಆಧಾರದ ಮೇಲೆ ಆಯೋಗವು ಇ-ಪ್ರಶಾಸನದ ಮೇಲೆ ತನ್ನ ಸಲಹೆಗಳನ್ನು ಜನವರಿ 2006ರಲ್ಲಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿತು ಮತ್ತು ಮೇ 2006ರಲ್ಲಿ ಪ್ರಕಟಗೊಳಿಸಿತು.

ಇ-ಪ್ರಶಾಸನವು ಕೇವಲ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಮತ್ತು ಸೌಲಭ್ಯಗಳ ಬಗ್ಗೆಯೇ ಆಗಿರದೆ, ಆಡಳಿತ ಸುಧಾರಣೆಗಳ ಬಗ್ಗೆ ಒಂದು ಅವಕಾಶವಾಗಿದೆ ಎಂದು ಆಯೋಗದ ವರದಿ ತಿಳಿಸುತ್ತದೆ. ಇ-ಪ್ರಶಾಸನದ ಬಗೆಗಿನ ಸಲಹೆಗಳು ವಿಸ್ತ್ರುತವಾಗಿ ಪ್ರಕ್ರಿಯೆಗಳು ಮತ್ತು ಗುಣಮಟ್ಟಗಳು, ಸೌಲಭ್ಯಗಳು ಮತ್ತು ಸಂಘಟನೆಗಳಿಗೆ ಸಂಬಂಧಿಸಿದೆ. ಇವು ಈ ಕೆಳಗಿನ ಅವಶ್ಯಕತೆಗಳನ್ನು ಎತ್ತಿಹಿಡಿದಿದೆ.:
  • ನಮ್ಮ ಮೂಲಭೂತ ಸರ್ಕಾರೀ ಪ್ರಶಾಸನ ವಿಧಾನವನ್ನು, ಸರಳೀಕರಿಸಲು, ಪಾರದರ್ಶಕ, ಉತ್ಪಾದಕತೆ ಮತ್ತು ಸಮರ್ಥಗೊಳಿಸಲು ಮೊದಲು ಪುನರ್ ಯಂತ್ರೀಕರಿಸುವುದು
  • ವಿಶೇಷ ಬದಲಾವಣೆ ಮಾಡುವ 10ರಿಂದ 20 ಪ್ರಮುಖ ಸೇವೆಗಳನ್ನು ಆಯ್ಕೆ ಮಾಡಿ, ಅವುಗಳನ್ನು ಸರಳೀಕರಿಸಿ ಮತ್ತು ಅವುಗಳನ್ನು ಜಾಲೀಯ ಸೇವೆಗಳಾಗಿ ನೀಡುವುದು
  • ಇ-ಪ್ರಶಾಸನಕ್ಕೆ ಸಾಮಾನ್ಯ ಮಟ್ಟಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಸಾಮಾನ್ಯ ವೇದಿಕೆ / ಸೌಲಭ್ಯಗಳನ್ನು ಒದಗಿಸುವುದು
  • ಎಲ್ಲಾ ಹೊಸ ರಾಷ್ಟ್ರೀಯ ಕಾರ್ಯಕ್ರಮಗಳನ್ನು (ಭಾರತ್ ನಿರ್ಮಾಣ, ಗ್ರಾಮೀಣ ಉದ್ಯೋಗ ಖಾತರಿ ಇತ್ಯಾದಿ) ಉತ್ತಮವಾಗಿ ಯಂತ್ರೀಕರಿಸಿದ ಇ-ಪ್ರಶಾಸನವನ್ನು ಜಾರಿಗೊಳಿಸಲು ಮತ್ತು ಜಾಲೀಯ ಅಂತರ್ ಮುಖಗಳ ಪ್ರಾರಂಭ
ರಾಷ್ಟ್ರೀಯ ಇ-ಪ್ರಶಾಸನವು ಮುಂದುವರೆಯಬೇ-ಕಾದರೆ ಕೇಂದ್ರ ಸಂಸ್ಥೆಯ ನಿರ್ಮಾಣವು ಕ್ಲಿಷ್ಟಕರ, ಅದು ಪೂರ್ಣ ಸ್ವಾಯತ್ತತೆ ಮತ್ತು ಉತ್ತದಾಯತ್ವವಾಗಿ ಕೆಲಸ ಮಾಡಬೇಕು. ಸರ್ಕಾರದ ಪ್ರಕ್ರಿಯೆಗಳ ಪುನರ್ ಯಂತ್ರಿಕರಣದ ವಿಷಯಗಳ ಸಂಘಟನೆಗೆ ಬಲಶಾಲಿಯಾದ ಮಾರ್ಗದರ್ಶನ, ಸ್ವಾಯತ್ತತೆ, ಮಣಿಯುವ, ಉದ್ದೇಶದ ಸ್ಪಷ್ಟತೆ, ಮೊದಲೇ ಗುರುತುಪಡಿಸಿದ ಬಿಡುಗಡೆಗಳು, ಗುರುತಿಸಬಹುದಾದ ಗುರುತುಗಳು ಮತ್ತು ನಿಯತಕಾಲಿಕ ಎಚ್ಚರಿಕೆಗಳನ್ನು ಗಮನಿಸುವುದು ಅವಶ್ಯಕ, ಇದರಿಂದ ರಾಷ್ಟ್ರೀಯ ಇ-ಪ್ರಶಾಸನವನ್ನು 3 ರಿಂದ 5 ವರ್ಷಗಳಲ್ಲಿ ಜಾರಿಗೆ ತರಲು ಸಾಧ್ಯವಾಗುತ್ತದೆ.


More e-Governance links: ಸಲಹೆಗಳು     ಸಂಪನ್ಮೂಲಗಳು